ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನಕಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿನ ವೈದ್ಯಕೀಯ ಸಲಕರಣೆಗಳ ಲಭ್ಯತೆ, ರೇಡಿಯಾಲಜಿಸ್ಟ್ ಹಾಗೂ ಅರಿವಳಿಕೆ ತಜ್ಞರ ಕೊರತೆ ಕುರಿತು ಈ ವೇಳೆ ಅವರು ಮಾಹಿತಿ ಪಡೆದಿದ್ದು,, ಗರ್ಭಿಣಿಯರ ಯೋಗಕ್ಷೇಮವನ್ನೂ ವಿಚಾರಿಸಿದ್ದಾರೆ.