ಬೇಸಿಗೆ ರಜೆಯಲ್ಲಿ ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಒಂದಲ್ಲಾ ಒಂದು ರೀತಿ ತಿಂಡಿ ಮಾಡಿಕೊಡುವಂತೆ ಕೇಳುತ್ತಲೇ ಇರುತ್ತಾರೆ. ಪ್ರತಿದಿನ ಬೇರೆ ಬೇರೆ ತಿಂಡಿ ಮಾಡಿಕೊಡುವುದು ಏನು ಸುಲಭವಲ್ಲ. ಅದರಲ್ಲಿಯೂ ಮಕ್ಕಳಿಗೆ ಇಷ್ಟವಾಗುವಂತೆ ಮಾಡಿಕೊಡುವುದು ಒಂದು ರೀತಿಯ ಸವಾಲು. ನೀವು ಇದೆ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಸುಲಭವಾಗಿ ಮಾಡಿಕೊಡಬಹುದಾದ ಕೊಕೊನಟ್ ಕುಕೀಸ್ ಮಾಡಿಕೊಡಬಹುದು. ಇದನ್ನು ಮಾಡುವುದು ಕೂಡ ಬಹಳ ಸುಲಭ. ಹೇಗೆ ಮಾಡಬೇಕು ಎನ್ನುವುದನ್ನು divya_divit_world ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ರೆಸಿಪಿ ಮೂಲಕ ತಿಳಿದುಕೊಳ್ಳಿ.