ಚಪಾತಿ, ಊಟದ ಜೊತೆ ಒಂದೇ ರೀತಿಯ ಪಲ್ಯ, ಸಾಂಬಾರ್ ಮಾಡಿ ಬೇಸರವಾಗಿದ್ದರೆ ನೀವು ಈ ಕರ್ಡ್ ಬಿಂಡಿ ಮಸಾಲಾವನ್ನು ಟ್ರೈ ಮಾಡಲೇ ಬೇಕು. ಹೌದು, ಚಪಾತಿ ಅನ್ನದ ಜೊತೆ ಇದು ಅದ್ಭುತ ಕಾಂಬಿನೇಷನ್. ಅಷ್ಟೇ ಅಲ್ಲ, ಇದನ್ನು ಸಿಂಪಲ್ ಆಗಿ ಬೇಗ ಮಾಡಿಬಿಡಬಹುದು. ಈ ರೀತಿ ಒಮ್ಮೆ ಮಾಡಿ ನೋಡಿದರೆ ಬೆಂಡೆಕಾಯಿ ತಿನ್ನದವರು ಕೂಡ ಮತ್ತೆ ಮತ್ತೆ ಬೇಕು ಅಂತಾ ಹಾಕಿಸಿಕೊಂಡು ತಿಂತಾರೆ. ಈ ವಿಡಿಯೋವನ್ನು spicewoodflavors ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.