ಉಪ್ಪಿನಕಾಯಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಊಟದ ಜೊತೆ ಯಾವುದಾದರೂ ಒಂದು ಉಪ್ಪಿನಕಾಯಿ ಇಲ್ಲ ಎಂದರೆ ಒಂದು ತುತ್ತು ಕೂಡ ಹೊಟ್ಟೆ ಒಳಗೆ ಹೋಗುವುದಿಲ್ಲ. ಈ ರೀತಿ ನಿಮಗೂ ಆಗುತ್ತಿದ್ದರೆ, ಬಾಯಲ್ಲಿ ನೀರು ತರಿಸುವ ನಿಂಬೆ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ. ಇದನ್ನು myflavourfuljourney ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಬಹುದು. ನಿಂಬೆ ಇಂದ ಮಾಡುವುದಾದ್ದರಿಂದ ಬಹಳ ರುಚಿಯಾದ ಉಪ್ಪಿನಕಾಯಿ ರೆಡಿಯಾಗುತ್ತದೆ. ನಿಮಗೂ ಕೂಡಾ ಅಂಗಡಿಯಿಂದ ತರುವ ಉಪ್ಪಿನಕಾಯಿ ಇಷ್ಟವಿಲ್ಲದಿದ್ದರೆ ನೀವು ಕೂಡ ಈ ಸಿಂಪಲ್ ರೆಸಿಪಿಯನ್ನು ಟ್ರೈ ಮಾಡಬಹುದು.