ರವೆ ಪಾಯಸ (Rava Payasam) 10-15 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರವಾದ ಸಿಹಿ ಖಾದ್ಯ. ತುಪ್ಪದಲ್ಲಿ ಹುರಿದ ರವೆ, ಹಾಲು, ಬೆಲ್ಲ (ಅಥವಾ ಸಕ್ಕರೆ), ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ ಬಳಸಿ ಇದನ್ನು ಸುಲಭವಾಗಿ ಮಾಡಬಹುದು. ಹಬ್ಬಗಳು ಅಥವಾ ಧಿಡೀರ್ ಸಿಹಿ ಬೇಕೆನಿಸಿದಾಗ ಇದು ಅತ್ಯುತ್ತಮ ಆಯ್ಕೆ. ಯಾರೇ ಮನೆಗೆ ಬರಲಿ ಏನು ಸಿಹಿ ಮಾಡುವುದು ಎಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬದಲಾಗಿ ಥಟ್ ಅಂತ ಮಾಡಿಕೊಡಬಹುದು. ಇದನ್ನು ಮಾಡುವ ರೆಸಿಪಿಯನ್ನು mom_of_achukutties ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ.