ಗೆಣಸಿನಿಂದ ವಿವಿಧ ರೀತಿಯ ರೆಸಿಪಿ ಮಾಡಬಹುದು ಎಂಬುದು ತಿಳಿದಿರುವ ವಿಚಾರ. ಆದರೆ ಇದು ಫ್ರೆಶ್ ಆಗಿ ಸಿಗುವ ಸಮಯದಲ್ಲಿ ಇದರಿಂದ ಬಗೆ ಬಗೆಯ, ಹೊಸ ರೆಸಿಪಿ ಮಾಡಿ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ನಿಮಗೂ ಕೂಡ ಸಿಹಿ ಗೆಣಸಿನಿಂದ ಏನಾದರೂ ಸ್ಪೆಷಲ್ ಆಗಿ ಏನನ್ನಾದರೂ ಮಾಡಿ ಸವಿಯಬೇಕು ಅಂದ್ರೆ ಸಿಹಿ ಗೆಣಸಿನ ಫ್ರೈ ಮಾಡಿ ತಿಂದು ನೋಡಿ. shobha_home ಎಂಬ ಇನ್ಸ್ಟಾ ಖಾತೆಯಲ್ಲಿ ಸಿಹಿ ಗೆಣಸಿನ ಫ್ರೈ ಮಾಡುವ ಸಿಂಪಲ್ ರೆಸಿಪಿಯನ್ನು ಹಂಚಿಕೊಳ್ಳಲಾಗಿದ್ದು ನೀವು ಕೂಡ ಮಾಡಿ ಸವಿಯಬಹುದಾಗಿದೆ. ಸಿಹಿ ಗೆಣಸಿನಲ್ಲಿ ಜೀವಸತ್ವಗಳು ಸಮೃದ್ಧವಾಗಿದ್ದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ಇದು ಜೀರ್ಣಕ್ರಿಯೆ, ಕರುಳಿನ ಆರೋಗ್ಯಕ್ಕೂ ಒಳ್ಳೆಯದು.