ಸಿಹಿ ಆಲೂಗಡ್ಡೆ ವಿಟಮಿನ್ A, C ಮತ್ತು E ಸಮೃದ್ಧವಾಗಿದ್ದು, ತ್ವಚೆಯನ್ನು ಸೂರ್ಯನ ಹಾನಿಯಿಂದ ರಕ್ಷಿಸಿ, ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇಯಿಸಿದ ಸಿಹಿ ಆಲೂಗಡ್ಡೆಯನ್ನು ಸಣ್ಣದಾಗಿ ಹೆಚ್ಚಿ, ಅದಕ್ಕೆ ಸೇಬು, ಸೌತೆಕಾಯಿ, ಶೇಂಗಾ, ನಿಂಬೆ ರಸ, ಜೇನುತುಪ್ಪ ಮತ್ತು ಸ್ವಲ್ಪ ಕಪ್ಪು ಉಪ್ಪು ಬೆರೆಸಿ ಆರೋಗ್ಯಕರ ಸಲಾಡ್ ತಯಾರಿಸಬಹುದು. ಇದು ತ್ವಚೆಗೆ ಪೋಷಣೆ ನೀಡಿ ಕಾಂತಿ ಹೆಚ್ಚಿಸುತ್ತದೆ. ಇದನ್ನು ತಯಾರಿಸುವ ವಿಧಾನವನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೇಕೆ ತಡ ಆರೋಗ್ಯಕ್ಕೆ ಒಳ್ಳೆಯದಾದ ತ್ವಚೆಯ ಅಂದ ಹೆಚ್ಚಿಸುವ ಈ ಸಲಾಡ್ ಮಾಡಿ ನೋಡಿ.