ಈದ್ ಮಿಲಾದ್ ಹಬ್ಬದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮುಸ್ಲಿಂ ಬಾಂಧವರು ಆಹಾರ ಪದಾರ್ಥ ವಿತರಿಸಿದರು. ರೋಗಿಗಳ ಕ್ಷೇಮ ವಿಚಾರಿಸಿ ಶೀಘ್ರ ಗುಣಮುಖರಾಗಲು ಹಾರೈಸುವ ಮೂಲಕ ಸಹೋದರತ್ವ ಹಾಗೂ ಮಾನವೀಯತೆಯ ಸೌಹಾರ್ದ ಸಂದೇಶ ಸಾರಿದರು.