ಸಾಮಾಜಿಕ ಜಾಲತಾಣದಲ್ಲಿ ವೃದ್ಧೆಯರ ಮುದ್ದಾದ ವಿಡಿಯೋಗಳು ವೈರಲ್ ಆಗುತ್ತಿವೆ. ಇದೇ ರೀತಿ, ವರ್ಷಗಳ ನಂತರ ತಮ್ಮ ಬಾಲ್ಯ ಸ್ನೇಹಿತೆಯರನ್ನು ಭೇಟಿಯಾದ ಅಜ್ಜಿಯೊಬ್ಬರ ಭಾವನಾತ್ಮಕ ವಿಡಿಯೋ ನೆಟ್ಟಿಗರಿಗೆ ಭಾರಿ ಖುಷಿ ನೀಡಿದೆ. ಈ ಮುದ್ದಾದ ವಿಡಿಯೋ, ಹಳೆಯ ಸ್ನೇಹದ ಮೌಲ್ಯವನ್ನು ಎತ್ತಿಹಿಡಿಯುತ್ತದೆ. ಅಜ್ಜಿ ಬಾಲ್ಯ ಸ್ನೇಹಿತರನ್ನು ನೋಡಿದಾಗ ಸಂತೋಷ ಪಟ್ಟ ಕ್ಷಣ ಎಲ್ಲರ ಮನಗೆದ್ದಿದೆ. ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.