ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರಬಳಿ ರಸ್ತೆಯಲ್ಲೇ ಗಂಟೆ ಘಟ್ಟಲೆ ಆನೆ ಠಿಕಾಣಿ ಹೂಡಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಯಾವುದೇ ಆತಂಕವಿಲ್ಲದೆ ಬಹು ಸಮಯ ಆನೆ ನಿಂತಲ್ಲೇ ನಿಂತ ಪರಿಣಾಮ ವಾಹನ ಸವಾರರಿಗೆ ತೊಂದರೆ ಆಗಿದೆ. ಘಟನೆಯ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.