ಹಾಸನದ ಅರಸೀಕೆರೆ ತಾಲೂಕಿನ ಚಿಂದೇನಹಳ್ಳಿಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಗದೆ ಹಿಡಿದು ಭೀಮನ ಪಾತ್ರದ ಸಂಭಾಷಣೆ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಾಟಕದ ಡೈಲಾಗ್ ಹೇಳುವಂತೆ ಸಚಿವರನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗದೆ ಹಿಡಿದು ಕುರುಕ್ಷೇತ್ರ ನಾಟಕದ ಸಂಭಾಷಣೆಯನ್ನು ಶಿವಲಿಂಗೇಗೌಡರು ಹೇಳಿದ್ದಾರೆ.