ರಾಜಕಾರಣ ಎನ್ನುವುದು ಬಿಡುವಿಲ್ಲದ ಕೆಲಸ. ದಿನವಿಡೀ ಸಾರ್ವಜನಿಕರ ಅಹವಾಲು ಆಲಿಸುವುದು, ಸಭೆ-ಸಮಾರಂಭಗಳು ಹಾಗೂ ದೆಹಲಿ-ಕರ್ನಾಟಕ ನಡುವಿನ ಓಡಾಟದ ನಡುವೆ ಕುಟುಂಬಕ್ಕೆ ಸಮಯ ಮೀಸಲಿಡುವುದು ಸವಾಲಿನ ಕೆಲಸ. ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆಯೂ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆದ್ದಿದೆ.