ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ರೈತ ಸುಬ್ರಮಣಿ ಅವರಿಗೆ ಬಿರುಗಾಳಿ ಸಹಿತ ಭಾರೀ ಮಳೆಯಿಂದ ತೀವ್ರ ನಷ್ಟವಾಗಿದೆ. 2 ಎಕರೆ ನೆಟ್ ಹೌಸ್ನಲ್ಲಿ ಬೆಳೆದಿದ್ದ ಟೊಮ್ಯಾಟೊ ಹಾಗೂ ಬೀನ್ಸ್ ಬೆಳೆ ಒಂದೇ ರಾತ್ರಿಗೆ ನಾಶವಾಗಿದೆ. ತಮ್ಮ ನೋವು ಯಾರಿಗೆ ಹೇಳಬೇಕೆಂದು ಗೊತ್ತಾಗದೆ ರೈತ ಅಳಲು ತೋಡಿಕೊಂಡಿದ್ದಾರೆ.