ರಾಗಿ ಮಾರಾಟಕ್ಕೆಂದು ಜಗಳೂರು ಎಪಿಎಂಸಿ ಬಳಿ ಇರುವ ಖರೀದಿ ಕೇಂದ್ರಕ್ಕೆ ನೂರಾರು ವಾಹನಗಳಲ್ಲಿ ರೈತರ ಆಗಮಿಸಿದ್ದು, ಇದರಿಂದ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.ದಿನಕ್ಕೆ 25 ರೈತರಿಂದ ರಾಗಿ ಖರೀದಿ ಮಾಡುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದರು .ಆದ್ರೆ ನೂರಾರು ರೈತರು ಏಕಕಾಲಕ್ಕೆ ಎಪಿಎಂಸಿಗೆ ರಾಗಿ ಹಾಕಿಕೊಂಡು ಬಂದಿದ್ದು, ಕಿ.ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತಿದ್ದಾರೆ.