ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಪುತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ(22) ಮೃತ ಯುವತಿಯಾಗಿದ್ದು, ತರಕಾರಿ ತಂದು ಸಾಂಬಾರ್ ಮಾಡಲು ತಂದೆ ನಟೇಶ್ ಸೌಜನ್ಯಾಗೆ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಸಾಂಬಾರ್ ಮಾಡಿಲ್ಲವೆಂದು ಅವರು ಬೈದಿದ್ದು, ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.