ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಜಿರಾಫೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರೆಳೆದಿದ್ದು, ಅನಾರೋಗ್ಯದಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಜಿರಾಫೆ ಮೃತಪಟ್ಟಿದ್ದು, ಅಂಗಾಂಗ ಮಾದರಿ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ರವಾನೆ ಮಾಡಲಾಗಿದೆ. 2024ರ ಫೆಬ್ರವರಿಯಲ್ಲಿ ಮೈಸೂರು ಮೃಗಾಲಯದಿಂದ ಇದನ್ನು ತರಲಾಗಿತ್ತು.