ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಸಫಾರಿಯಲ್ಲಿ ಪ್ರವಾಸಿಗರಿಗೆ ಹೆಬ್ಬುಲಿ ದರ್ಶನವಾಗಿ ಸಂತಸ ಮೂಡಿಸಿದೆ. ಸಫಾರಿ ಜೀಪ್ ಬಳಿಯೇ ಬಂದು ಫೋಟೊಗೆ ಪೋಸ್ ನೀಡಿದ ವ್ಯಾಘ್ರ ಎಲ್ಲರ ಗಮನ ಸೆಳೆಯಿತು. ಈ ಹಿಂದೆ ಬಂಡೀಪುರದ 'ಪ್ರೀನ್ಸ್' ಹುಲಿಯಂತೆ, ಕೆ.ಗುಡಿ ಹುಲಿ ಕೂಡ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಚಾಮರಾಜನಗರದ ವನ್ಯಜೀವಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡಿದೆ.