ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿರುವ ದುರ್ಗಾಂಭ ದೇವಿ ದೇವಸ್ಥಾನದಲ್ಲಿ ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವರ ಹುಂಡಿಗೆ ಕೈ ಹಾಕಿದ ಈ ಕಳ್ಳರು, ಫೆವಿಕಾಲ್ ಬಳಸಿ ದೇವಸ್ಥಾನದಲ್ಲಿ ಕಳ್ಳತನ ಎಸಗಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ದೇವಸ್ಥಾನದ ಭದ್ರತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.