ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಮಸಣಗುಡಿ ಬಳಿ ಮರಿ ಮುಳ್ಳುಹಂದಿ ತಿನ್ನಲು ಬಂದ ಚಿರತೆಗೆ ತಾಯಿ ಮುಳ್ಳುಹಂದಿ ತನ್ನ ಮುಳ್ಳುಗಳಿಂದಲೇ ಚುಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಚಿರತೆ ಜತೆ ಮುಳ್ಳುಹಂದಿ 2 ನಿಮಿಷ 52 ಸೆಕೆಂಡ್ ಹೋರಾಡಿದ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.