ಪ್ರಯಾಗ್ರಾಜ್ ಮಾಘ ಮೇಳದ ಸೆಕ್ಟರ್ -5 ರಲ್ಲಿರುವ ನಾರಾಯಣ ಧಾಮ್ ಶಿಬಿರದಲ್ಲಿ ಇಂದು ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಉಳಿದುಕೊಂಡಿದ್ದ ಯಾತ್ರಿಕರಲ್ಲಿ ಭಯಭೀತಿ ಮೂಡಿಸಿದೆ. ನಾರಾಯಣ ಧಾಮ್ ಶಿಬಿರದಲ್ಲಿ ಸ್ಥಾಪಿಸಲಾದ 15 ಡೇರೆಗಳಲ್ಲಿ 50ಕ್ಕೂ ಹೆಚ್ಚು ಭಕ್ತರು ತಂಗಿದ್ದರು.