ಭಾರತ ದೇಶದಲ್ಲೇ ಸಂಪೂರ್ಣವಾಗಿ ತಯಾರಾದ ಪ್ರಥಮ 'ಮೇಡ್ ಇನ್ ಇಂಡಿಯಾ' ಏರ್ಬಸ್ ಸಿ-295 (Airbus C-295) ಸಾರಿಗೆ ವಿಮಾನವು ಗುಜರಾತ್ನ ವಡೋದರಾದಲ್ಲಿ ತನ್ನ ಚೊಚ್ಚಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ರಕ್ಷಣಾ ರಂಗದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ 'ಆತ್ಮನಿರ್ಭರ ಭಾರತ' ಯೋಜನೆಗೆ ಗುಜರಾತ್ನ ವಡೋದರಾದಿಂದ ಬಿಡುಗಡೆಯಾದ ಈ ಸುದ್ದಿ ಭಾರಿ ಬಲ ನೀಡಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಏರ್ಬಸ್ ಡಿಫೆನ್ಸ್ ಜಂಟಿಯಾಗಿ ವಡೋದರಾದಲ್ಲಿ ಸ್ಥಾಪಿಸಿರುವ ಬೃಹತ್ ಫೆಸಿಲಿಟಿಯಲ್ಲಿ ತಯಾರಾದ ಮೊದಲ ಸಿ-295 ಮಿಲಿಟರಿ ಸಾರಿಗೆ ವಿಮಾನವು ತನ್ನ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ.