ನಿನ್ನೆ ರಾತ್ರಿ ಚೀನಾದ ಹೆಬೈಯ ಚೆಂಗ್ಡೆಯಲ್ಲಿರುವ ಕುವಾನ್ಚೆಂಗ್ ಮಂಚು ಸ್ವಾಯತ್ತ ಕೌಂಟಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ ಇಡೀ ನಗರವೇ ಮುಳುಗಿಹೋಗಿದೆ. ಈ ಘಟನೆಯ ಭೀಕರ ಪ್ರವಾಹದ ವಿನಾಶಕಾರಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆಟಿಕೆಗಳಂತೆ ಕಾರುಗಳನ್ನು ಪ್ರವಾಹವು ಕೊಚ್ಚಿಕೊಂಡು ಹೋಗುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.