ಮೈಸೂರು ಜಿಲ್ಲೆಯಲ್ಲೂ ಫ್ಲೆಕ್ಸ್ ಹರಿದು ಗಲಾಟೆ ಆರೋಪ ಕೇಳಿಬಂದಿದೆ. ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಾಜಿ ಶಾಸಕ ಸಾ.ರಾ.ಮಹೇಶ್, MLC ಹೆಚ್.ವಿಶ್ವನಾಥ್ ಫ್ಲೆಕ್ಸ್ ಹರಿದು ಹಾಕಿ ಬೀಳಿಸಿದ್ದಾನೆ. ಶಾಸಕ ರವಿಶಂಕರ್ ಅಭಿಮಾನಿಗಳ ವಿರುದ್ಧ ಕೃತ್ಯದ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧಿತ ವಿಡಿಯೋ ವೈರಲ್ ಆಗಿದೆ.