ಐತಿಹಾಸಿಕ ಹಂಪಿಯಲ್ಲಿ ಹೋಳಿ ಸಂಭ್ರಮ ವಿಜೃಂಭಣೆಯಿಂದ ಜರುಗಿದೆ. ಯುವಕ, ಯುವತಿಯರು ತಮಟೆ ನಾದಕ್ಕೆ ಸಕತ್ ಸ್ಟೆಪ್ಸ್ ಹಾಕಿ ಹಬ್ಬದ ಸಡಗರವನ್ನು ಹೆಚ್ಚಿಸಿದರು. ಸಂಗೀತ ಮತ್ತು ಜನಸಂದಣಿಯ ಸಂಭ್ರಮದಿಂದ ಕೂಡಿದ ಈ ಆಚರಣೆ ವಿಜಯನಗರದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸಿತು. ವಿದೇಶಿಗರು ಕೂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.