ಗ್ರೀನ್ ಕ್ಯಾಬೇಜ್ (ಎಲೆಕೋಸು) ಸಲಾಡ್ ಆರೋಗ್ಯಕರವಾಗಿದ್ದು, ಬೇಸಿಗೆ ಕಾಲದಲ್ಲಿ ತಪ್ಪದೆ ತಿನ್ನುವ ಖಾದ್ಯಗಳಲ್ಲಿ ಒಂದಾಗಿದೆ.ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಕೆಲವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಬೆರೆಸಿ ಇದನ್ನು ಸುಲಭವಾಗಿ ತಯಾರಿಸಬಹುದು. ರುಚಿಯನ್ನು ಹೆಚ್ಚಿಸಲು ನಿಮಗೆ ಬೇಕಾದ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡಬಹುದು. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ. ವೀಕೆಂಡ್ ಆಗಿರುವುದರಿಂದ ಮಕ್ಕಳು ಕೂಡ ಇಷ್ಟ ಪಟ್ಟು ತಿನ್ನುತ್ತಾರೆ. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು bayanbites7 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.