ಟಿವಿ9 ಪ್ರಭಾವ ಮತ್ತು ಪ್ರಾಣಿಪ್ರಿಯರ ಧ್ವನಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಂದಿಸಿದ್ದಾರೆ. ದಸರಾ ವೈಭವದ ಪ್ರತೀಕವಾಗಿದ್ದ, ಏಕಾಂಗಿಯಾಗಿದ್ದ ವಯೋವೃದ್ಧ ಗಜೇಂದ್ರ ಆನೆಯನ್ನು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಈ ನಿರ್ಧಾರವು ಗಜೇಂದ್ರನಿಗೆ ಅಗತ್ಯ ವೈದ್ಯಕೀಯ ಆರೈಕೆ ಮತ್ತು ಹಳೆಯ ಸಹಚರರ ಒಡನಾಟ ನೀಡಲಿದ್ದು, ಪ್ರಾಣಿಪ್ರಿಯರಲ್ಲಿ ಸಂತಸ ಮೂಡಿಸಿದೆ.