ಮೈಸೂರು ಮಹಾರಾಜರ ಪಟ್ಟದ ಆನೆಯಾಗಿದ್ದ ಗಜೇಂದ್ರ ಈಗ ಬೂದಿಪಡಗದಲ್ಲಿ ಏಕಾಂತ ಜೀವನ ಕಳೆಯುತ್ತಿದೆ. 2015ರಲ್ಲಿ ಮಾವುತನನ್ನು ಕೊಂದ ಘಟನೆಯ ನಂತರ ದಸರಾದಿಂದ ಹೊರಗಿಟ್ಟ ಗಜೇಂದ್ರನಿಗೆ ವೃದ್ಧಾಪ್ಯದಲ್ಲಿ ಸಾಂಗತ್ಯ ಬೇಕು ಎಂಬುದು ಪ್ರಾಣಿಪ್ರಿಯರ ಆಗ್ರಹ. ಆತನನ್ನು ದೊಡ್ಡ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.