ಬಳ್ಳಾರಿಯ ಗಾಂಧಿನಗರ ಬಳಿ ನಿದ್ದೆ ಮಂಪರಿನಲ್ಲಿ ಮೈನಿಂಗ್ ಲಾರಿ ಚಾಲಕನೊಬ್ಬ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಮೋಕಾ ಸಂಪರ್ಕಿಸುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಲಾರಿ ಡಿವೈಡರ್ ಮೇಲೆ ಹತ್ತಿದೆ. ಸಂಡೂರಿನಿಂದ ಹಗರಿ ಕಡೆ ಹೊರಟಿದ್ದ ಲಾರಿ ಇದಾಗಿದ್ದು, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕರ ನಿರ್ಲಕ್ಷ್ಯದಿಂದ ಆಗುವ ಅನಾಹುತಕ್ಕೆ ಇದು ಮತ್ತೊಂದು ನಿದರ್ಶನ.