ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದ ಜಮೀನಿನಲ್ಲಿ ಕೃಷಿ ಜಮೀನಿನಲ್ಲಿ ಕಾಡು ಕೋಣಗಳು ಬಿಂದಾಸ್ ಆಗಿ ಓಡಾಟ ನಡೆಸಿವೆ. ಮುಂಡಗೋಡ ಅರಣ್ಯ ಪ್ರದೇಶದಿಂದ ಜಮೀನಿಗೆ ಬಂದ ಕಾಡುಕೋಣಗಳನ್ನು ಕಂಡು ರೈತರು ಕಂಗಾಲಾಗಿದ್ದು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನ ಕಾಡುಕೋಣಗಳು ಹಾಳು ಮಾಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.