ಮೈಸೂರು ಮೃಗಾಲಯದಲ್ಲಿ 25 ವರ್ಷದ ಯುವರಾಜ ಹೆಸರಿನ ಜಿರಾಫೆಯ ಬರ್ತ್ಡೇಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಅದರ ಇಷ್ಟದ ಆಹಾರವಾದ ಕಿತ್ತಲೆ ಹಣ್ಣು ಹಾಗೂ ವಿವಿಧ ಕಾಳುಗಳಿಂದ ಮೃಗಾಲಯ ಸಿಬ್ಬಂದಿ ವಿಶೇಷ ಕೇಕ್ ತಯಾರಿಸಿ ಜಿರಾಫೆ ಹುಟ್ಟ ಹಬ್ಬ ಆಚರಿಸಿದರು. ಸದ್ಯ ಜಿರಾಫೆ ಹುಟ್ಟುಹಬ್ಬದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.