ಗೋಲ್ಡ್ ಪ್ರಿಯರಿಗೆ ಸುವರ್ಣಾವಕಾಶ ಒದಗಿಬಂದಿದೆ. ದಾಖಲೆ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬದಲಾವಣೆಯಿಂದಾಗಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 14000 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 12,835 ರೂ. ಆಗಿದೆ. ಒಂದೇ ದಿನಕ್ಕೆ 10 ಗ್ರಾಂ ಚಿನ್ನಕ್ಕೆ 5 ಸಾವಿರ ರೂಪಾಯಿಗೂ ಹೆಚ್ಚು ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 15 ಸಾವಿರ ರೂ. ಇಳಿದಿದ್ದು 2.30 ಲಕ್ಷ ರೂ.ಗೆ ಕುಸಿದಿದೆ.