ಹಬ್ಬದ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಗ್ರಾಹಕರಿಗೆ ಶುಭಸುದ್ದಿ ಸಿಕ್ಕಿದೆ. ಒಂದು ವಾರದಲ್ಲೇ 10 ಗ್ರಾಂ ಚಿನ್ನಕ್ಕೆ 12 ಸಾವಿರ ರೂ. ಕಡಿಮೆಯಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದ ಮಾರುಕಟ್ಟೆ ಅಸ್ಥಿರವಾಗಿದ್ದು, ಇಂದಿನ 18 ಕ್ಯಾರಟ್ ಚಿನ್ನದ ಬೆಲೆ 11,320 ರೂ. ಆಗಿದೆ. ಬೆಳ್ಳಿ ದರವೂ 1 ಕೆ.ಜಿ.ಗೆ 5 ಸಾವಿರ ರೂ. ಇಳಿದಿದೆ.