ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅದ್ದೂರಿ ಸ್ವಾಗತ ದೊರೆಯಿತು. ಪಂಪ್ವೆಲ್ ವೃತ್ತದಲ್ಲಿ ತೆರೆದ ಬಸ್ನಲ್ಲಿ ಆಗಮಿಸಿದ ಸಿಎಂ ಅವರನ್ನು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, "ಡಿಕೆ ಡಿಕೆ" ಎಂದು ಜೈಕಾರ ಹಾಕಿ ಸಂಭ್ರಮದಿಂದ ಬರಮಾಡಿಕೊಂಡರು. ಸಚಿವ ಸಂಪುಟ ಸಭೆಗೂ ಮುನ್ನ ಈ ಅದ್ಧೂರಿ ಸ್ವಾಗತವು ಗಮನ ಸೆಳೆಯಿತು.