ಮಾರುಕಟ್ಟೆಯಲ್ಲಿ ದ್ರಾಕ್ಷಿ ಯಥೇಚ್ಛವಾಗಿ ಸಿಗುತ್ತಿದೆ. ಇದನ್ನು ಸುಮ್ಮನೆ ತಿನ್ನುವುದಕ್ಕಿಂತ ಒಂದು ಸ್ಪೆಷಲ್ ರೆಸಿಪಿಯನ್ನು ಮಾಡಿ ಸವಿಯಬಹುದು. ಹೌದು, rakshanarayan_ ಎಂಬ ಇನ್ಸ್ಟಾ ಖಾತೆಯಲ್ಲಿ ಈ ಒಂದು ಸಿಂಪಲ್ ರೆಸಿಪಿಯನ್ನು ಹಂಚಿಕೊಳ್ಳಲಾಗಿದ್ದು ನೀವು ಕೂಡ ಇದನ್ನು ಮಾಡಿ ನೋಡಬಹುದು. ದ್ರಾಕ್ಷಿ ಜೀರಾ ಮಸಾಲ ಮಾಡುವುದಕ್ಕೂ ಒಳ್ಳೆಯದು ಮಾತ್ರವಲ್ಲ, ತಿನ್ನುವುದಕ್ಕೂ ತುಂಬಾ ರುಚಿಯಾಗಿರುತ್ತದೆ. ಇನ್ನೇಕೆ ತಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಮಕ್ಕಳಿಗೂ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.