ದ್ರಾಕ್ಷಿ ಶರ್ಬತ್ ಒಂದು ಉಲ್ಲಾಸಕರ ಮತ್ತು ಆರೋಗ್ಯಕರ ಪಾನೀಯ. ಅದರಲ್ಲಿಯೂ ಬೇಸಿಗೆಯಲ್ಲಿ ಮಾಡಿ ಕುಡಿಯಲೇಬೇಕಾದ ಶರ್ಬತ್. ಇದನ್ನು ಕಪ್ಪು ಅಥವಾ ಹಸಿರು ದ್ರಾಕ್ಷಿ, ಪುದೀನಾ, ನಿಂಬೆ ರಸ, ಜೀರಿಗೆ ಪುಡಿ ಮತ್ತು ಕಪ್ಪು ಉಪ್ಪನ್ನು ಬಳಸಿ ಸುಲಭವಾಗಿ ತಯಾರಿಸಬಹುದು. ಇದು ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದ್ದು, ದೇಹವನ್ನು ಹೈಡ್ರೀಕರಿಸಿ ತಂಪಾಗಿರಿಸಲು ಸಹಾಯ ಮಾಡುತ್ತದೆ. ಇನ್ನೇಕೆ ತಡ ನೀವು ಒಮ್ಮೆ ಮಾಡಿ ನೋಡಿ. ಈ ವಿಡಿಯೋವನ್ನು bliss_is_food ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.