ಅಚಾನಕ್ಕಾಗಿ ಕಾಡಾನೆಗಳ ಮಧ್ಯೆ ಸಿಲುಕಿದರೂ ಬೈಕ್ ಸವಾರ ಗ್ರೇಟ್ ಎಸ್ಕೇಪ್ ಆದ ವಿಸ್ಮಯಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಕಾನಳ್ಳಿ ಫಾರೆಸ್ಟ್ ಬಳಿ ನಡೆದಿದೆ. ಯುವಕನೊಬ್ಬ ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ. ಇದೇ ವೇಳೆ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದವು. ಕಾಡಾನೆ ರಸ್ತೆಯಲ್ಲಿ ಇರೋದನ್ನ ಕಾಣದೆ ದಿಢೀರ್ ಬಂದ ಯುವಕ ಅವುಗಳ ಮಧ್ಯೆ ಸಿಲುಕಿದ್ದಾನೆ. ತಕ್ಷಣವೇ ಸವಾರಿಸಿಕೊಂಡು ಹಿಂದಕ್ಕೆ ತೆರಳಿ ಬಚಾವಾಗಿದ್ದಾನೆ. ಈ ದೃಶ್ಯ ಮತ್ತೊಂದು ಬದಿಯಲ್ಲಿದ್ದ ಬೈಕ್ ಸವಾರರ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.