ಗ್ರೇಟರ್ ಬೆಂಗಳೂರು ಅಥಾರಿಟಿಯು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ 369 ಕೋಟಿ ರೂ. ತೆರಿಗೆ ಬಾಕಿ ಇದ್ದು, 9930 ಆಸ್ತಿಗಳಿಗೆ 49,898 ನೋಟಿಸ್ಗಳನ್ನು ನೀಡಲಾಗಿದೆ. ಜಿಪಿಎಸ್, ಡ್ರೋನ್, ಐವಿಆರ್ ಮತ್ತು ಎಸ್ಎಂಎಸ್ ಮೂಲಕ ತೆರಿಗೆ ಮಾಹಿತಿ ಸಂಗ್ರಹಿಸಿ, ನೋಟಿಸ್ಗಳನ್ನು ತಲುಪಿಸಲಾಗುತ್ತಿದೆ.