ಮನೆಯಲ್ಲಿ ಪೇರಳೆ ಹಣ್ಣಿದ್ದಲ್ಲಿ ಮಿಸ್ ಮಾಡ್ದೆ ಈ ಒಂದು ಚಾಟ್ ಟ್ರೈ ಮಾಡಿ ನೋಡಿ. ಹೌದು, ಪೇರಳೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಚಳಿಗಾಲದಲ್ಲಿ ಈ ಹಣ್ಣನ್ನು ಯಥೇಚ್ಛವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಬರಿ ಹಣ್ಣನ್ನು ಮಾತ್ರ ಸೇವನೆ ಮಾಡುವುದು ಇಷ್ಟವಾಗುವುದಿಲ್ಲ ಎಂದ್ರೆ ಕೆಲವೇ ಕೆಲವು ಪದಾರ್ಥಗಳನ್ನು ಹಾಕಿ ಚಾಟ್ ಮಾಡಬಹುದು. ಈ ರೀತಿ ಒಮ್ಮೆ ಮಾಡಿ ಸೇವನೆ ಮಾಡಿದರೆ ನೀವು ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ, ಈ ವಿಡಿಯೋವನ್ನು foodcraftnlife ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.