ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯಲ್ಲಿ ಒಂಟಿ ಸಲಗವೊಂದು ಬೆಳ್ಳಂಬೆಳಗ್ಗೆಯೇ ಲಾರಿಗಳನ್ನು ಅಡ್ಡ ಹಾಕಿ ವಸೂಲಿಗೆ ಯತ್ನಿಸುತ್ತಿರುವ ವಿಡಿಯೋ ಮತ್ತೆ ವೈರಲ್ ಆಗಿದೆ. ತರಕಾರಿ ಹಾಗೂ ಕಬ್ಬು ತುಂಬಿದ ಲಾರಿಗಳೇ ಈ ಕಾಡಾನೆಯ ಟಾರ್ಗೆಟ್ ಆಗಿದ್ದು, ಪ್ರತಿ ವಾಹನವನ್ನು ಚೆಕ್ ಮಾಡಿ ಬಿಡುತ್ತಿದೆ. ಲಾರಿಗಳು ಟಾರ್ಪಲ್ ಹಾಕಿ ಬಂದರೂ ಅದನ್ನು ಕಿತ್ತು ದಾಳಿ ನಡೆಸುತ್ತಿದೆ.