ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದಲ್ಲಿ ತೀವ್ರ ಬಿಸಿಲಿನ ಝಳಕ್ಕೆ ಕಂಗಾಲಾದ ಕೋತಿಗಳು, ನೀರು ಅರಸಿ ಕಾಡಿನಿಂದ ನಾಡಿಗೆ ಬಂದಿವೆ. ಬಾಯಾರಿಕೆ ಇಂಗಿಸಿಕೊಳ್ಳಲು ಮತ್ತು ಬಿಸಿಲಿನಿಂದ ಪಾರಾಗಲು ಗ್ರಾಮಸ್ಥರ ಮನೆಯ ಮುಂದಿನ ನೀರಿನ ಸಂಪಿನಲ್ಲಿ ಮುಳುಗಿ ಆಟವಾಡಿವೆ. ಈ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಬಿಸಿಲಿನ ತಾಪಕ್ಕೆ ವನ್ಯಜೀವಿಗಳ ಪರದಾಟ ಎತ್ತಿ ತೋರಿಸುತ್ತದೆ.