ರಾಜ್ಯದಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಮುಂದುವರಿದಿದ್ದು, ಹನೂರು ಪೊಲೀಸರು ಗಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ 14 ಹಸುವಿನ ಕರುಗಳನ್ನು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಖಸಾಯಿ ಖಾನೆಗೆ ಸಾಗಣೆ ಮಾಡುತ್ತಿದ್ದ ಬೋಲೊರೊ ವಾಹನವನ್ನು ವಶಪಡಿಸಿಕೊಂಡರು. ಕರ್ನಾಟಕ ಚೆಕ್ ಪೋಸ್ಟ್ ಮೂಲಕ ತಮಿಳುನಾಡಿಗೆ ನಡೆಯುತ್ತಿದ್ದ ಈ ಅಕ್ರಮ ಯತ್ನವನ್ನು ಸ್ಥಳೀಯರ ಮಾಹಿತಿ ನೆರವಿನಿಂದ ವಿಫಲಗೊಳಿಸಲಾಗಿದೆ.