ಮದುವೆಯಾಗಲು ಹುಡುಗಿ ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಬೇಲೂರಿನ ವಿಷ್ಣುಸಮುದ್ರ ಸಮೀಪ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ಲೂರು ತಾಲೂಕಿನ ಗುಡ್ಡರು ಗ್ರಾಮದ ವಿನಯ್ (35) ಕಲ್ಯಾಣಿಗೆ ಹಾರಿ ಮೃತಪಟ್ಟಿದ್ದಾನೆ. ಈತನಿಗೆ ಕುಟುಂಬಸ್ಥರು ಕಳೆದ ಐದಾರು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದರು.