ನೈಸ್ನಲ್ಲಿ ನಮ್ಮ ಜಮೀನಿದ್ದರೆ ಅವರ ಹೆಸರಿಗೆ ಬರೆದುಕೊಡುತ್ತೇನೆ. ಕುಮಾರಸ್ವಾಮಿ ನಮ್ಮನ್ನು ಬೈಯ್ಯಲು ಇನ್ನೂ ಸ್ವಲ್ಪ ವರ್ಷ ಇರಬೇಕು, ನೇಣು ಹಾಕಿಕೊಳ್ಳುವುದು ಬೇಡ ಎಂದು ರಾಮನಗರದಲ್ಲಿ ಪೌರಾಡಳಿತ ಸಚಿವ ಹೆಚ್ಸಿ ಬಾಲಕೃಷ್ಣ ಹೇಳಿದ್ದಾರೆ. ನಮ್ಮಲ್ಲಿ ಬಲಿಷ್ಠ ಕೇಂದ್ರದ ಮಂತ್ರಿ ಇದ್ದಾರೆ. ಅವರು ನಮ್ಮನ್ನ ದರಿದ್ರ ಎಂದು ಬೈದಿದ್ರು. ನಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಎಷ್ಟು ದರಿದ್ರ ಬಿಡುಗಡೆ ಮಾಡಿಸುತ್ತಾರೆ ನೋಡ್ತೇವೆ. ಕುಮಾರಸ್ವಾಮಿ ಬೊಗಳೆ ಬಿಡೋದು ಬಿಟ್ಟುಬಿಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.