ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರ ಸಮಾಧಿ ಬಳಿ ಹಾಲು-ತುಪ್ಪ ಕಾರ್ಯಗಳನ್ನು ನೆರವೇರಿಸಿದರು. ಕುಟುಂಬದ ಸದಸ್ಯರು, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸೇರಿ ಭೋಜನ ಸವಿದರು. ವಿದೇಶದಿಂದಲೂ ಆಗಮಿಸಿದ್ದ ಕುಟುಂಬಸ್ಥರೊಂದಿಗೆ, ದೇವೇಗೌಡರು ಭಾವನಾತ್ಮಕವಾಗಿ ಕೆಲ ಮಾತುಗಳನ್ನಾಡಿದರು, ಪ್ರೀತಿಪಾತ್ರರಿಗೆ ಗೌರವ ಸಲ್ಲಿಸಿದರು.