ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮನೆಯಿಂದ ಕೊಂಡೊಯ್ಯುವ ಸಂದರ್ಭದಲ್ಲಿ ಹೆಚ್.ಡಿ. ದೇವೇಗೌಡರು ತೀವ್ರವಾಗಿ ಭಾವುಕರಾಗಿದ್ದು, ಪತ್ನಿಯ ಅಗಲಿಕೆಯ ನೋವು ತಾಳಲಾರದೆ ದೇವೇಗೌಡ್ರು ಪಾರ್ಥಿವ ಶರೀರದ ಪೆಟ್ಟಿಗೆಗೆ ತಲೆ ಕೊಟ್ಟು ಬಿಕ್ಕಿ ಬಿಕ್ಕಿ ಅತ್ತರು. ಈ ದೃಶ್ಯ ಎಲ್ಲರ ಮನಸ್ಸನ್ನು ಕಲಕಿದೆ.