ಜೆಡಿಎಸ್ ಪಾದಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಜರ್ಬಾದ್ನ ಖ್ಯಾತ ಮೈಲಾರಿ ಹೋಟೆಲ್ನಲ್ಲಿ ಇಡ್ಲಿ ಮತ್ತು ದೋಸೆ ಸವಿದರು. ಬಿಡದಿ ಟೌನ್ಶಿಪ್ ಯೋಜನೆ ಕುರಿತ ಪಾದಯಾತ್ರೆ ವೇಳೆ ಕುಮಾರಸ್ವಾಮಿ ಅವರು ಜನಸಾಮಾನ್ಯರಂತೆ ಉಪಹಾರ ಸೇವಿಸಿದ್ದು ಗಮನ ಸೆಳೆಯಿತು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರೊಂದಿಗೆ ಹಾಜರಿದ್ದರು.