ಹೆಚ್ಡಿ ಕುಮಾರಸ್ವಾಮಿ 80 ಲಕ್ಷ ರೂ. ವಾಚ್ ಕಟ್ಟುತ್ತಾರೆ ಎಂಬ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದರು. ಮಾಧ್ಯಮ ಪ್ರತಿನಿಧಿಗಳಿಗೆ ವಾಚ್ ತೋರಿಸಿದ ಅವರು, ಇದು ಹೆಚ್ಎಂಟಿ ವಾಚ್. ಅಂಬೇಡ್ಕರ್ ಚಿತ್ರ ಇರುವಂಥದ್ದು. ಇದಕ್ಕೆ 80 ಲಕ್ಷ ರೂ. ಇರಬಹುದಾ ನೀವೇ ಹೇಳಿ ಎಂದರು. ಅಲ್ಲದೆ, ಬೇಕಿದ್ದರೆ ಎಸ್ಐಟಿ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.