ಆರೋಗ್ಯವಾಗಿರಲು ನಾವು ಸೇವನೆ ಮಾಡುವ ಆಹಾರ ಸರಿಯಾಗಿರಬೇಕಾಗುತ್ತದೆ. ಅದರಲ್ಲಿಯೂ ತೂಕವನ್ನು ಒಂದೇ ರೀತಿ ಕಾಪಾಡಿಕೊಳ್ಳಲು ಬಯಸುವವರು ಆಹಾರದಲ್ಲಿ ಆದಷ್ಟು ಕಟ್ಟುನಿಟ್ಟನ್ನು ಪಾಲಿಸುವುದು ಅನಿವಾರ್ಯ. ಆದರೂ ಬಾಯಿ ರುಚಿ ಕೇಳಬೇಕೆಲ್ಲವೇ? ಆಗ ಆರೋಗ್ಯಕರವಾಗಿಯೂ ಬಾಯಿಯ ರುಚಿಗೆ ಅನುಗುಣವಾಗಿಯೂ ಇರುವಂತಹ ಆಹಾರ ಆಯ್ಕೆ ಮಾಡುವುದು ಅನಿವಾರ್ಯವಾಗುತ್ತದೆ. ನಿಮಗೂ ಕೂಡ ಈ ರೀತಿಯ ಸಮಸ್ಯೆ ಇದ್ದಲ್ಲಿ ಈ ಸೌತೆಕಾಯಿ ಸಲಾಡ್ ಮಾಡಿ ನೋಡಿ. ಇದರ ರೆಸಿಪಿಯನ್ನು foodiesfood_recipe ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಗಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಬಹುದು.