ಸಾಮಾನ್ಯವಾಗಿ ಹೆಂಗಳೆಯರು ಎಲ್ಲಕಿಂತ ಮುಖ್ಯವಾಗಿ ತಮ್ಮ ಅಂದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಮೇಕ್ಅಪ್ ಮಾತ್ರವಲ್ಲ ಆಹಾರದಲ್ಲಿ ಕೆಲವು ಆರೋಗ್ಯಕರ ಬದಲಾವಣೆ ಮಾಡಿಕೊಳ್ಳುವುದರಿಂದಲೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ರೀತಿ ನಿಮ್ಮ ಚರ್ಮದ ಆರೈಕೆ ಮಾಡಲು ಬೆಸ್ಟ್ ರೆಸಿಪಿ ಪೇರಳೆ ಸಲಾಡ್ ಚಾಟ್. ಇದು ರುಚಿಯ ಜೊತೆಗೆ ಕರುಳು ಮತ್ತು ಚರ್ಮಕ್ಕೆ ಒಳ್ಳೆಯದಾಗಿದೆ. ಇದರ ರೆಸಿಪಿಯನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಮಾಡಿ ನೋಡಿ.