ಸಂಜೆ ಸಮಯದಲ್ಲಿ ಸಿಂಪಲ್ ಆಗಿ ಏನನ್ನಾದರೂ ಮಾಡಬೇಕು ಅಂದ್ರೆ ಆರೋಗ್ಯಕರ ಮಖಾನ ಚಾಟ್ ಮಾಡಿ ತಿನ್ನಬಹುದು. ಹೌದು, ಸಿಂಪಲ್ ಆಗಿ ಫ್ರೈ ಮಾಡದೆಯೇ ಮಾಡಬಹುದಾದ ಚಾಟ್ ಇದಾಗಿದ್ದು ಈ ರೆಸಿಪಿಯನ್ನು theflavrqueen ಇನ್ಸ್ಟಾಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಖಾನ ಬಹಳ ಆರೋಗ್ಯಕರವಾಗಿದ್ದು, ಇದರಿಂದ ಚಾಟ್ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಬಾಯಿಗೂ ಒಳ್ಳೆಯ ರುಚಿ ಸಿಗುತ್ತದೆ. ಸ್ಪೈಸಿಯಾಗಿ, ಕ್ರಂಚಿಯಾಗಿ ಏನನ್ನಾದರೂ ಮಾಡಬಹುದಾಗಿದ್ದರೆ ಈ ರೆಸಿಪಿ ಮಸ್ಟ್ ಟ್ರೈಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಕೂಡ ಒಮ್ಮೆ ಟ್ರೈ ಮಾಡಿ.